Monthly Archives: July 2016

ಕನಸಿನರಸಿ

ಸುರಿವ ಸೋನೆ ಮಳೆಯ ನಡುವೆ
ಮಿಂಚಂತೆ ಕಂಡವಳು ನೀನು
ನಡು ರಾತ್ರಿಯ ನೀರವ ಮೌನದಲಿ
ನನ್ನೆದೆಯ ಬಡಿತವಾದೆ ನೀನು

ಓಡುತಿಹುದೆನ್ನ ಮನವು
ಯಜ್ಞಾಶ್ವದಂತೆ ನಿನ್ನೆಡೆಗೆ
ಸೆಳೆಯುತಿಹುದೆನ್ನ ಆ ನಿನ್ನ ನಗುವು
ಬರಲಾರೆಯ ನೀ ನನ್ನೆಡೆಗೆ

ಹೇಗೆ ಹೇಳಲಿ ನಾ
ನೀ ನನ್ನ ಕನಸಿನರಸಿಯೆಂದು
ಏನೆಂದು ಬರೆಯಲಿ ನಾ
ನೀ ನನ್ನ ಬರಹಕೆ ಸ್ಪೂರ್ತಿಯೆಂದು.

ಕಾದಿಹೆನು ನಾ ನಿನಗಾಗಿ
ನನ್ನೆದೆಯ ಬಾಗಿಲನು ತೆರೆದು
ಬಂದು ಬಿಡು ಗೆಳತಿ
ನಗುನಗುತ ನನ್ನೆಡೆಗೆ ನೀನಿಂದು.